ಕ್ರೆಡಿಟ್ ಕಾರ್ಡ್ ಒಂದು ಸರಳ ಆರ್ಥಿಕ ಸಾಲದ ಸಾಧನವಾಗಿದೆ ಮತ್ತು ಇದು ಸಮರ್ಥವಾಗಿ ಮತ್ತು ಜವಬ್ದಾರಯುತವಾಗಿ ಬಳಸಿದ್ದಲ್ಲಿ ಸಾಕಷ್ಟು ಲಾಭಗಳನ್ನು ಕೊಡುತ್ತದೆ. ನಿಗದಿತ ಅವಧಿಯ ಒಳಗೆ ಪೂರ್ತಿ ಮೊತ್ತವನ್ನು ಪಾವತಿಸದಿದ್ದರೆ ಕ್ರೆಡಿಟ್ ಕಾರ್ಡ್ ದೊಡ್ಡ ಮೊತ್ತದ ಶುಲ್ಕಕ್ಕೆ ಕಾರಣವಾಗುತ್ತದೆ.
ಈ ಲೇಖನದಲ್ಲಿ ಕ್ರೆಡಿಟ್ ಕಾರ್ಡಿನ ಸಮರ್ಥ ಬಳಕೆ ಮತ್ತು ಅದರೊಂದಿಗೆ ಬರುವ ಜವಾಬ್ದಾರಿಗಳನ್ನು ಅರಿತು, ಅದರಿಂದ ಹೆಚ್ಚಿನ ಲಾಭ ಪಡೆಯುವ ದಾರಿಗಳ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಇದು ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಕಾರ್ಡಿನ ಪ್ರಕಾರಗಳ ಲಾಭ ಮತ್ತು ದುಷ್ಪರಿಣಾಮಗಳನ್ನು ಎತ್ತಿಹಿಡಿಯುತ್ತದೆ ಹಾಗೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡಿನ ಮಧ್ಯೆ ಇರುವ ವ್ಯತ್ಯಾಸಗಳನ್ನು ತಿಳಿಸುತ್ತದೆ.